Current Date 10 Jun, 2026

ವಕೀಲ್ ಸಾಬ್ ಲುಕ್ ಕೊಟ್ಟ ರಾಕಿ ಭಾಯ್; 'ಟಾಕ್ಸಿಕ್' ಲುಕ್ ಎಂದು ಕುಣಿದಾಡಿದ ಫ್ಯಾನ್ಸ್!

ರಾಕಿ ಭಾಯ್ ಈಗ 'ಟಾಕ್ಸಿಕ್' ಮೂಡ್‌ನಲ್ಲಿ ಇದ್ದಾರೆ. ಕೆಲವು ತಿಂಗಳ ಹಿಂದಷ್ಟೇ ಈ ಸಿನಿಮಾ ಮುಹೂರ್ತ ಕಂಡಿತ್ತು. ಅಲ್ಲಿಂದ ಯಶ್ ಅಭಿಮಾನಿಗಳು ಸಿನಿಮಾ ಅಪ್‌ಡೇಟ್‌ಗಾಗಿ ಎದುರು ನೋಡುತ್ತಲೇ ಇದ್ದಾರೆ. ಈ ಮಧ್ಯೆ ಸೋಶಿಯಲ್ ಮೀಡಿಯಾದಲ್ಲಿ ಯಶ್ ಕರಿ ಕೋಟ್ ಧರಿಸಿ ಶೂಟಿಂಗ್‌ನಲ್ಲಿ ಭಾಗಿಯಾಗಿರುವ ವಿಡಿಯೋ ಹಾಗೂ ಫೋಟೊಗಳು ಹರಿದಾಡುತ್ತಿವೆ.